ವಿಶ್ವೇಶ್ವರ ಭಟ್ಟರಿಗೆ ಧನ್ಯವಾದಗಳುಕರುಣಾ ಮರಣಕ್ಕಾಗಿ ಎದೆಗುಂದದೆ ಇಂದಿಗೂ ಹೋರಾಟ ನಡೆಸುತ್ತಿರುವ ಹಿರಿಯ ಜೀವ, ನಿವೃತ್ತ ಶಿಕ್ಷಕಿ ದಾವಣಗೆರೆಯ ಕರಿಬಸಮ್ಮ ಹೇಗಿದ್ದಾರೆ, ಎಲ್ಲಿದ್ದಾರೆ ಎಂದು ಕನ್ನಡಪ್ರಭದ "ಹೇಳಿ ಬುದ್ದಿ ಏನ್ ಸುದ್ದಿ" ವಿಭಾಗಕ್ಕೆ ಕೋರಿದ್ದೆ. ಅದಕ್ಕೆ ತಕ್ಷಣ ಸ್ಪಂದಿಸಿ, ಅವರ ಬಗ್ಗೆ ವರದಿ ನೀಡಿದ ಹಾಗೂ ಕನ್ನಡ ಪತ್ರಿಕೋದ್ಯಮದಲ್ಲಿ ಸಂಚಲನ ತಂದಿರುವ ಕ ಪ್ರ ಸಂಪಾದಕರಾದ ವಿಶ್ವೇಶ್ವರ ಭಟ್ಟರಿಗೆ ಮತ್ತು ಅವರ ತಂಡಕ್ಕೆ ಅನಂತ ಧನ್ಯವಾದಗಳು. ಹಾಗೆ ಹಿರಿಯ ಜೀವ, ನಿವೃತ್ತ ಶಿಕ್ಷಕಿ ಕರಿಬಸಮ್ಮ ಅವರಿಗೆ ದೇವರು ಆರೋಗ್ಯವನ್ನು ಕರುಣಿಸಲಿ ಎಂದು ಹಾರೈಸುತ್ತೇನೆ