ಬೀಚ್ ಎಂಬ ಬಿಡದೆ ಕಾಡಿದ ಗುಮ್ಮ !


ಪೂರ್ವ ಕರಾವಳಿ ಬಂಗಾಳ ಕೊಲ್ಲಿ ತನ್ನ ಘನ ಗಂಭಿರ್ಯದಲ್ಲೂ ಅಲೆಯೊಂದಿಗೆ ತಂಗಾಳಿಯನ್ನು ರವಾನಿಸುತ್ತಿದೆ.ನೇಸರ ತನ್ನ ಪ್ರತಿಬಿಂಬವನ್ನು ಶರಧಿಯಲ್ಲಿ ನೋಡಿ ನೋಡಿ ಸಾಕಾಗಿ ಮನೆಗೆ ಮರಳಲು ಕೊನೆಯ ಹಂತದ ಸಿದ್ಧತೆ ನಡೆಸುತ್ತಿದ್ದಾನೆ.ಇತ್ತ ಪುಟ್ಟ ಮಗುವಂದು ಮರಳಿನಲ್ಲಿ ಮನೆ ಕಟ್ಟಲು ತನ್ನ ತಾಯಿಯನ್ನು ಪೀಡಿಸುತ್ತಿದೆ.ರೋಸಿಗೊಂಡ ತಾಯಿ ಮನೆ ಕಟ್ಟಲು ಮುಂದಾಗುತಿದ್ದಾಳೆ.ಅಮ್ಮನಿಗೆ ಸಹಾಯವಾಗಲೆಂದು ಆ ಪುಟ್ಟ ಮಗು ನಿರಂತರವಾಗಿ ಮರಳನ್ನು ಒಟ್ಟುಗೂಡಿಸುತ್ತಿದೆ.ಕೈ ಕೊಳೆಯಾಯಿತೆಂದು ಅಮ್ಮ ಗದರಿಸಲು ಮಗು ಮುನಿಸಿಗೊಂಡು ಆ ನೀಲ ಶರಧಿಯತ್ತ ಮುಖ ಮಾಡಿದೆ.ಸಿಟ್ಟಿನಿಂದ ಕಾಲಿಗೆ ತಾಕಿದ ಅಲೆಗೆ ಕಾಲಿನಿಂದಲೇ ಹೊಡೆದಿದೆ.ಮಗು ಹೊಡೆತಕ್ಕೆ ಗದರಿದಂತೆ ಅಲೆ ಮತ್ತೆ ಹಿಂಬರ್ಕಿಯಾಗಿ ಸಾಗರದ ಒಡಲ ಸೇರುತ್ತಿದೆ. ಅಮ್ಮ ಮರಳಿನ ಮನೆ ಕಟ್ಟಲು ಮುನಿದ ಮಗು ಸಂಭ್ರಮಿಸಿದೆ. ಅಲ್ಲೊಬ್ಬ ವಿದೇಶಿ ಯುವತಿ ಆ ಅಪಾರ ನೀರನ್ನು ಕಂಡು ತನ್ನೆರಡು ಕೈಗಳನ್ನು ಗಲ್ಲಕಿಟ್ಟುಕೊಂಡು ಚಕಿತಗೊಂಡಿದ್ದಾಳೆ. ಅಲೆ ಬಂದೊಡನೆ ಜಿಗಿದು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾಳೆ. ಅವಳ ಪಾದಗಳು ನೀರನ್ನು ಸ್ಪರ್ಶಿಸಲು ಚಿಲ್ ಎಂದು ಕೂಗಿ ಸಂಭ್ರಮಿಸಿದ್ದಾಳೆ. ಅದೇನೋ ಮರೆತಂತೆ ನೆನಪಾಗಿ ತನ್ನ ಹೋಟೆಲ್ ಕೊಠಡಿಯತ್ತ ಮುಖ ಮಾಡಿ ಓಡಿ ಹೋಗಿದ್ದಾಳೆ. ಅಲ್ಲಿಂದ ಲ್ಯಾಪ್ಟಾಪ್ ಹೊತ್ತು ಮತ್ತೆ ತೀರಕ್ಕೆ ! ಬಹುಶಃ ತನಗಾದ ತಾಜಾ ಅನುಭವಗಳನ್ನು ತನ್ನಿಯನೊಂದಿಗೆ ಹಂಚಿಕೊಳ್ಳುವ ಹಂಬಲವೇನೋ? ತನ್ನ ಧ್ವನಿಗಾಗಿ ಹೂಗೊಟ್ಟು ಕೂತಂತಿರುವ ಸಾಗರದಾಚೆಗಿನ ತನ್ನ ಇನಿಯನಿಗೆ ಅದೇನೋ ಟೈ ಪಿಸಿದ್ದಾಳೆ. ಐ ಮಿಸ್ ಯು .... ಆ ಕಡೆಯಿಂದ ನಗು ಮುಖದೊಂದಿಗೆ ಐ ಟೂ.. ಎಂಬ ಉದ್ಗಾರ. ಅಲ್ಲಿ ನಿಸ್ತಂತು ಅಂತರ್ಜಾಲ ಸೌಲಬ್ಯವಿದೆ. ಇಷ್ಟಕೆಲ್ಲ ಪ್ರೈವೇಟ್ ಬೀಚ್ ಎಂಬ ಸಂಕೋಲೆ ಇದೆ.

10 ಕಾಮೆಂಟ್‌ಗಳು:

ಅನಿಕೇತನ ಹೇಳಿದರು...

ನಮಸ್ಕಾರ ಸರ್, ಮೊದಲ ಚೆಂಡಿಗೆ ಸಿಕ್ಸರ್ ಹೊದೆದಿದ್ದಿಯ :)
ಹೇಯ್ ಚೆನ್ನಾಗಿದೆ ..ನಿನ್ನ ಬ್ಲಾಗು ನೋಡೋಕೆ ಮತ್ತು ಓದೋಕೂ ಕೂಡ ....ಚೆಂದ ಚೆಂದ ಚೆಂದ ...:)
ಮಗು ಹೊಡೆತಕ್ಕೆ ಗದರಿದಂತೆ ಅಲೆ ಮತ್ತೆ ಹಿಂಬರ್ಕಿಯಾಗಿ ಸಾಗರದ ಒಡಲ ಸೇರುತ್ತಿದೆ.....ಇದು ಬಹಳ ಇಷ್ಟ ಆಯ್ತು :)
ಶುಭಾವಾಗಲಿ..ಬರಿತಾ ಇರು , ಬರಿತಾನೆ ಇರು.....:)
ಅನಿಕೇತನ

Vijayalakshmi ಹೇಳಿದರು...

ವೀರೇಶ್ ನಿನ್ನ ಈ ಮೊದಲ ಬರವಣಿಗೆ ಬಹಳ ಸೊಗಸಾಗಿದೆ. ನೀನು ಅಕ್ಷರಗಳನ್ನು ಬಹಳ ಸೊಗಸಾಗಿ ಜೋಡಿಸಿ ಬರೆದಿರುವೆ. ಹೀಗೆ ಬರೆಯುತ್ತಿರು.

mruganayanee ಹೇಳಿದರು...

yes Its good
I think you have more concrete ideas you haven bought it here.
innU EnEnO hELakkittu annistide
hELtiraa alva?

ಅನಾಮಧೇಯ ಹೇಳಿದರು...

Hey, tumba chennagide kano. You have scored good in the first attempt itself. Keep it up!!
Ninnalliro srujanasheelatena tumba channagi vyakta padsidiya which is very good. Try to keep up the same in your forthcoming writings also because it feels so real.

Adarsh

Vanishri.Pallagatte Math ಹೇಳಿದರು...

ತಂತ್ರಾಶ ಅಭೀಯಂತರರ
ತಂಗಾಳಿಯಂಥ ಬರವಣಿಗೆಗೆ
ನನ್ನ ಅಭಿನಂದನೆಗಳು ..........

ವೀರೆಶ ಹಿರೇಮಠ ಹೇಳಿದರು...

ಕಮೆಂಟಿಸಿದ ಸರ್ವರಿಗೂ ತುಂಬು ಹೃದಯದ ಧನ್ಯವಾದಗಳು

sunil ಹೇಳಿದರು...

ಹೇಯ್...ಮುಂದಿನ ಬರಹ ಯಾವಾಗಪ್ಪ? ಬೇಗ ಬರಲಿ.

Ram ಹೇಳಿದರು...

excellent viru...keep going

Suresh ಹೇಳಿದರು...

Hi sir,
Excellent, but we r waiting more...............

Thanq.............

Anand ಹೇಳಿದರು...

Olledagali...
nimma
Shubha chintake

ANAND